Current Date 31 Jul, 2026

ಚೈತ್ರಾ ಮೇಲಿನ ಪ್ರಕರಣದ ಲೆಕ್ಕ ಕೊಟ್ಟ ಜಗದೀಶ್; ‘ನಿಮ್ಮಪ್ಪನಿಗೆ ಹುಟ್ಟಿದ್ರೆ..’ ಎಂದು ಲೇಡಿ ಸ್ಪರ್ಧಿ ಸವಾಲ್

‘ಬಿಗ್ ಬಾಸ್ ಕನ್ನಡ ಸೀಸನ್ 11’ರ ಸ್ಪರ್ಧಿಗಳ ಪಟ್ಟಿ ರಿವೀಲ್ ಆದಾಗ ಅಚ್ಚರಿ ಎನಿಸಿದ್ದು ಚೈತ್ರಾ ಕುಂದಾಪುರ ಅವರ ಹೆಸರು. ಸಾಕಷ್ಟು ವಿವಾದ ಮಾಡಿಕೊಂಡಿದ್ದ ಅವರು ಬಿಗ್ ಬಾಸ್ ಮನೆಗೆ ಹೋದ ಬಳಿಕ ಸೈಲೆಂಟ್ ಆಗಿದ್ದರು. ಚೈತ್ರಾ ಹೊರಗಡೆ ಮಾಡಿಕೊಂಡ ವಿವಾದಗಳು ಒಂದೆರಡಲ್ಲ. ಬಿಗ್ ಬಾಸ್​ನಲ್ಲಿ ಇದರ ಲೆಕ್ಕವನ್ನು ಜಗದೀಶ್ ಅವರು ನೀಡಿದ್ದಾರೆ. ಇದರಿಂದ ಇಬ್ಬರ ಮಧ್ಯೆ ದೊಡ್ಡ ಜಗಳವೇ ನಡೆದು ಹೋಗಿದೆ.

ಚೈತ್ರಾ ತಮ್ಮ ಸಹೋದರಿ ಎಂದು ಹೇಳಿಕೊಳ್ಳುತ್ತಾ ಬರುತ್ತಿದ್ದವರು ಜಗದೀಶ್. ಇದಕ್ಕೆ ಹಲವು ಕಾರಣಗಳು ಇದ್ದವು. ಇಬ್ಬರೂ ಜೈಲಿಗೆ ಹೋಗಿ ಬಂದಿದ್ದರು. ಇದನ್ನು ಜಗದೀಶ್ ಅವರು ಹೆಚ್ಚು ಹೈಲೈಟ್ ಮಾಡುತ್ತಾ ಇದ್ದರು. ಈಗ ಅವರು ಚೈತ್ರಾ ವಿರುದ್ಧವೇ ತಿರುಗಿ ಬಿದ್ದಿದ್ದಾರೆ. ಕಲರ್ಸ್ ಕನ್ನಡದಲ್ಲಿ ಈ ಕುರಿತು ಹೊಸ ಪ್ರೋಮೋ ಹಾಕಲಾಗಿದೆ.